ಉಸ್ಮಾನ್ 3 -
	1699-1757. ತುರ್ಕಿಯ ಆಟೋಮನ್ ಸುಲ್ತಾನ. ಎರಡನೆಯ ಮುಸ್ತಾಪನ ಮಗ. ಅಣ್ಣ ಒಂದನೆಯ ಮಹಮ್ಮದ್ ಸತ್ತಾಗ ಈತ ಪಟ್ಟಕ್ಕೆ ಬಂದ (1754). ಆಗ ಇವನಿಗೆ ಐವತ್ತು ವರ್ಷ. ಅದುವರೆಗೂ ಒಂಟಿಯಾಗಿಯೇ ಜೀವನ ಸಾಗಿಸಿದ್ದ. ಈತ ಗಾಬರಿಯ ಮನುಷ್ಯ; ಸಂಪ್ರದಾಯ ಪ್ರಿಯ. ಈತನ ಉದ್ದೇಶ ಒಳ್ಳೆಯದಾದರೂ ಮಾಡಿದ್ದೊಂದೂ ನೆಟ್ಟಗಾಗಲಿಲ್ಲ. ಅಧಿಕಾರಕ್ಕೆ ಬಂದೊಡನೆ ತನಗೆ ಸಲ್ಲಬೇಕಾಗಿದ್ದ ಕಪ್ಪಕಾಣಿಕೆ ನಿಲ್ಲಿಸಿದ.

	ಉಸ್ಮಾನ್ ಸ್ತ್ರೀದ್ವೇಷಿ. ಅವರು ಬಣ್ಣ ಬಣ್ಣದ ಬಟ್ಟೆ ಧರಿಸಬಾರದೆಂದು ಆe್ಞÁಪಿಸಿದ. ವಾರಕ್ಕೆ ನಾಲ್ಕು ದಿನ ಅವರು ಮನೆಯಲ್ಲೇ ಇರಬೇಕೆಂಬುದು ಈತನ ಕಟ್ಟಾಜ್ಞೆ. ಕ್ರೈಸ್ತಪ್ರಜೆಗಳು ಎಂಥ ಉಡುಪು ಧರಿಸಬೇಕೆಂಬುದನ್ನೂ ಈತ ನಿಷ್ಕರ್ಷಿಸಿದ. ಮಹಾವಜೀರರ ಬಗ್ಗೆ ಈತನಿಗೆ ಅಷ್ಟೇನೂ ಒಳ್ಳೆಯ ಭಾವನೆ ಇರಲಿಲ್ಲ. ಅವರ ಹಕ್ಕುಗಳನ್ನು ಈತ ಕಸಿದುಕೊಂಡದ್ದಲ್ಲದೆ ಅವರಲ್ಲಿ ಹಲವರನ್ನು ಕೊಲೆ ಮಾಡಿಸಿದ.										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ